ಅಭಿಪ್ರಾಯ / ಸಲಹೆಗಳು

ವೀರಭದ್ರ ಕುಣಿತ

ಕರ್ನಾಟಕದಲ್ಲಿರುವ ಶೈವ ಸಂಪ್ರದಾಯಕ್ಕೆ ಸೇರಿದ ಒಂದು ಜನಪದ ಧಾರ್ಮಿಕ ವೀರನೃತ್ಯ. ದಕ್ಷಿಣ ಕರ್ನಾಟಕದಲ್ಲಿ ಲಿಂಗಭೇದ, ಲಿಂಗಧೀರ, ಲಿಂಗವೀರ ಕುಣಿತವೆಂದೂ, ಉತ್ತರ ಕರ್ನಾಟಕದಲ್ಲಿ ಪುರವಂತಿಕೆ ಕುಣಿತವೆಂದೂ ಗುರುತಿಸಲ್ಪಡುತ್ತದೆ.

 

ವೀರಗಾಸೆಯ ನೃತ್ಯದಂತೆ ವೀರಭದ್ರನ ಕುಣಿತವೂ ಸಾಮೂಹಿಕ ನೃತ್ಯವಾಗದೆ ಏಕವ್ಯಕ್ತಿಯ ಕುಣಿತವಾಗಿದೆ.

 

ವೀರಭದ್ರನ ವೇಷಭೂಷಣಗಳು ಹೀಗಿರುತ್ತವೆ: ತಲೆಗೆ ಚಮರಿಮೃಗದ ಚೌರಿ, ಎರಕದ ನೂರೊಂದು ಲಿಂಗಗಳು, ಹಣೆಗೆ ಭಸ್ಮ ಗಂಧ ಕುಂಕುಮಗಳ ಅಲಂಕಾರ, ಕಿವಿಗಳಿಗೆ ರುದ್ರಾಕ್ಷಿ ಸೇರಿಸಿದ ಕುಂಡಲಗಳು. ಕೊರಳಿಗೆ ರುದ್ರಾಕ್ಷಿ ಮಾಲೆ, ಎರಡು ಭುಜಗಳಿಗೆ ನಾಗಾಭರಣ, ಬಲಗೈಯಲ್ಲಿ ಹಿಡಿಯ ಭಾಗದಲ್ಲಿ ಸಣ್ಣಸಣ್ಣ ನಾಲಗೆಯನ್ನು ಜೋಡಿಸಿದ್ದು ಝಳಪಿಸಿದರೆ ಶಬ್ದ ಬರುವ ಖಡ್ಗ. ಈ ಖಡ್ಗಕ್ಕೆ  ‘ತೋಪಡ’ ಎಂದು ಹೆಸರು. ಎಡಗೈಯಲ್ಲಿ ಮುಳ್ಳಂಬು ಎಂಬ ವಿಶೇಷವಾದ ಚಾಕು, ಸೊಂಟದ ಮಧ್ಯದಲ್ಲಿ ಕೀರ್ತಿಮುಖ, ಎರಡು ಪಕ್ಕಗಳಿಗೆ ರುಂಡಮಾಲೆ ದಕ್ಷಬ್ರಹ್ಮನ ಶಿರಸ್ಸು, ಸರಪಳಿ, ಹೊಕ್ಕಳಗಂಟೆ, ಮಂಡಿಗಳಿಗೆ ಐದೈದು ಜಂಗುಗಳು, ಕಾಲುಗಳಿಗೆ ಕಿರುಗೆಜ್ಜೆ ಗಗ್ಗರ ಮತ್ತು ಕಾಲ್ಬಂಧಿಗಳು, ಮೈಮೇಲೆ ಕಾವಿಯ ನಿಲುವಂಗಿ ಕಾವಿಯ ಚಲ್ಲಣ ಅಥವಾ ಕೆಂಪು ನಿಲುವಂಗಿ ಮತ್ತು ಕೆಂಪು ಚಲ್ಲಣ.

 

ಓಲಗ, ತಮಟೆ ವಾದ್ಯಗಳ ಸದ್ದಿಗೆ ತಕ್ಕಂತೆ ವೀರಭದ್ರನು ಆಡುವ ಮಾತುಗಳನ್ನು ಖಡ್ಗ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದಲ್ಲಿ ಈ ಮಾತನ್ನು ಒಡಪು ಎಂದು ಕರೆಯುತ್ತಾರೆ. ಈ ಕಲಾವಿದನು ವೀರಾವೇಶದಿಂದ ನರ್ತಿಸುವಾಗ ಆಡುವ ಖಡ್ಗಕ್ಕೆ ಉತ್ತರ ರೂಪವಾಗಿ ಅನುಯಾಯಿ ಒಬ್ಬ “ಭಲರೇ ವೀರ, ಹರೋಹರಾ” ಎಂದು ಕಾಕು ಹೇಳುತ್ತಾ ಜಾಗಟೆ ಬಡಿಯುತ್ತಾ ನಿಧಾನವಾಗಿ ವೀರಭದ್ರನ ಸುತ್ತ ತಿರುಗುತ್ತಾನೆ.

 

ಈ ಕುಣಿತದಲ್ಲಿ ಕೆಲವು ಪವಾಡಗಳು ಪ್ರವೇಶಿಸುತ್ತವೆ. ಅಂಗೈ ಹಾಗೂ ನಾಲಗೆಯ ಮೇಲೆ ಉರಿಯುವ ಕರ್ಪೂರವನ್ನು ಇಟ್ಟುಕೊಳ್ಳುವಿಕೆ, ನೀರು ತುಂಬಿದ ಚೊಂಬನ್ನು ಹೊತ್ತು ನೀರು ಚೆಲ್ಲದಂತೆ ಸುತ್ತಿಸುವಿಕೆ, ಅಕ್ಕಿ ತುಂಬಿದ ಚೊಂಬನ್ನುಅಕ್ಕಿ ಚೆಲ್ಲದಂತೆ ತಿರುಗಿಸುವಿಕೆ ಮುಂತಾದ ಪವಾಡಗಳು ಇರುತ್ತವೆ. ಕೊಂಡಹಾಯುವ ಸಂದರ್ಭವು ಇರುತ್ತದೆ.

ಇತ್ತೀಚಿನ ನವೀಕರಣ​ : 13-06-2023 03:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080